Anganwadi Recruitment 2025 – ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳ ನೇಮಕಾತಿ 2025 | 7Th & 10Th ಪಾಸ್ ಅರ್ಜಿ ಸಲ್ಲಿಸಿ

Anganwadi Recruitment 2025

Anganwadi Recruitment 2025 – ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಹುದ್ದೆಗಳ ನೇಮಕಾತಿ 2025 | 7Th & 10Th ಪಾಸ್ ಅರ್ಜಿ ಸಲ್ಲಿಸಿ

ನಮಸ್ಕಾರ ಗೆಳೆಯರೇ 7ನೇ ತರಗತಿ ಹಾಗೂ 10ನೇ ತರಗತಿ ಪಾಸಾದವರಿಗೆ ಇದೀಗ ಸಿಹಿ ಸುದ್ದಿ.! ನಮ್ಮ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ.?

ಆದ್ದರಿಂದ ನಾವು ಯಾವ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳು ಖಾಲಿ ಇವೆ ಹಾಗೂ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಹಾಗೂ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗಿದೆ ಎಂಬ ಮಾಹಿತಿಯನ್ನು ನಾವು ಈ ಒಂದು ಲೇಖನ ಮೂಲಕ ತಿಳಿಸಿ ಕೊಡುತ್ತಿದ್ದೇವೆ ಆದ್ದರಿಂದ ನೀವು ಈ ಲೇಖನಿಯನ್ನು ಆದಷ್ಟು ಶೇರ್ ಮಾಡಲು ಪ್ರಯತ್ನ ಮಾಡಿ

WhatsApp Group Join Now
Telegram Group Join Now       

 

ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳ ನೇಮಕಾತಿ..?

ಹೌದು ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಖಾಲಿ ಇರುವ ಸುಮಾರು 277 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಹೊಸ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ ಮತ್ತು ಈ ಅಧಿಸೂಚನೆ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 7ನೇ ತರಗತಿ ಹಾಗೂ 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ

ಆದ್ದರಿಂದ ನಾವು ಈ ಒಂದು ಲೇಖನ ಮೂಲಕ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಕೆ ಮಾಡುವುದು ಹಾಗೂ ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳು ಯಾವ್ಯಾವು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ ಹಾಗಾಗಿ ನೀವು ಈ ಲೇಖನವನ್ನು ಆದಷ್ಟು ಮಹಿಳೆಯರಿಗೆ ಶೇರ್ ಮಾಡಲು ಪ್ರಯತ್ನ ಮಾಡಿ

 

ಖಾಲಿ ಹುದ್ದೆಗಳ ನೇಮಕಾತಿ ವಿವರ(Anganwadi Recruitment 2025)..?

ನೇಮಕಾತಿ ಸಂಸ್ಥೆ:- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ

ಖಾಲಿ ಹುದ್ದೆಗಳ ಸಂಖ್ಯೆ:- 277 ಹುದ್ದೆಗಳು

ಅರ್ಜಿ ಸಲ್ಲಿಸುವ ವಿಧಾನ:- ಆನ್ಲೈನ್ ಮೂಲಕ

ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ:- 05 ಸೆಪ್ಟೆಂಬರ್ 2025

ಉದ್ಯೋಗ ಸ್ಥಳ:- ಚಿತ್ರದುರ್ಗ ಜಿಲ್ಲೆಯ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ

ಹುದ್ದೆಗಳ ವಿವರ:-

1) ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು

2) ಅಂಗನವಾಡಿ ಸಹಾಯಕಿ ಹುದ್ದೆಗಳು

WhatsApp Group Join Now
Telegram Group Join Now       

 

ಅಂಗನವಾಡಿ ಕಾರ್ಯಕರ್ತೆ & ಸಹಾಯಕಿ ಖಾಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?

ವಿದ್ಯಾರ್ಹತೆ:- ಸ್ನೇಹಿತರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಿಡುಗಡೆ ಮಾಡಿರುವ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಕಾರ್ಯಕರ್ತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಎಸ್ ಎಸ್ ಎಲ್ ಸಿ ಪಾಸ್ ಆಗಿರಬೇಕು ಹಾಗೂ ಸಹಾಯಕಿ ಹುದ್ದೆಗಳಿಗೆ ಏಳನೇ ತರಗತಿ ಪಾಸ್ ಆಗಿರಬೇಕು ಮತ್ತು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ

ವಯೋಮಿತಿ ಎಷ್ಟು:- ಸ್ನೇಹಿತರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಾಹಿತ್ಯ ಹುದ್ದೆಗಳು ಅರ್ಜಿ ಸಲ್ಲಿಸಲು ಬಯಸುವ ಮಹಿಳಾ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಹೊಂದಿರಬೇಕು ಮತ್ತು ಗರಿಷ್ಠ 28 ವರ್ಷ ವಯೋಮಿತಿ ನಿಗದಿ ಮಾಡಲಾಗಿದೆ ಹಾಗೂ ಮೀಸಲಾತಿ ಆಧಾರಗಳ ಮೇಲೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 05 ವರ್ಷ ಹಾಗೂ OBC ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ಅಂಗವಿಕಲ/PWBD ಮತ್ತು ವಿಶೇಷ ಚೇತನ ಮಹಿಳಾ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಲಿಕ್ಕೆ ನೀಡಲಾಗಿದೆ

 

ಈ ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡಲಾಗುತ್ತದೆ..?

ಸ್ನೇಹಿತರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ವಿವಿಧ ಅಂಗನವಾಡಿ ಕೇಂದ್ರದಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಿದ ವಿದ್ಯಾರ್ಥಿಗಳನ್ನು ಯಾರು ಹೆಚ್ಚು ಅಂಕಗಳಿಸಿರುತ್ತಾರೆ ಅಂತವರನ್ನು ಮೊದಲು ಆಯ್ಕೆ ಮಾಡಲಾಗುತ್ತದೆ ನಂತರ ಶಾರ್ಟ್ ಲಿಸ್ಟ್ ತಯಾರು ಮಾಡಿ ಅಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನ ಹಾಗೂ ಇತರ ವಿಧಾನಗಳನ್ನು ಆಧರಿಸಿ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ ಹಾಗಾಗಿ ಆಯ್ಕೆಗೆ ಸಂಬಂಧಿಸಿದಂತೆ ಇನ್ನಷ್ಟು ಹೆಚ್ಚಿನ ವಿವರ ಪಡೆಯಲು ಅಧಿಕೃತ ಅಧಿಸೂಚನೆ ಡೌನ್ಲೋಡ್ ಮಾಡಿಕೊಳ್ಳಿ

 

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ..?

ಸ್ನೇಹಿತರೆ ನೀವು ಚಿತ್ರದುರ್ಗ ಜಿಲ್ಲೆಯಲ್ಲಿ ಖಾಲಿ ಇರುವ ಸುಮಾರು ಎರಡು ನೂರಕ್ಕಿಂತ ಹೆಚ್ಚು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದಾರೆ ಮೊದಲು ಈ ಒಂದು ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಬಿಡುಗಡೆ ಮಾಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ ನಂತರ ಅದರಲ್ಲಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳಿ ಹಾಗೂ ಕೆಳಗಡೆ ನೀಡಿದ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಕೆ ಮಾಡಿ

 

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

https://karnemakaone.kar.nic.in/abcd/home.aspx

 

ಒಂದು ವೇಳೆ ನಿಮಗೆ ಈ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಮಗೆ ಬರದೆ ಇದ್ದಲ್ಲಿ ನೀವು ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ಬೇಗ ನಿಮ್ಮ ಹತ್ತಿರದ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 277 ಹುದ್ದೆಗಳಿಗೆ ಬೇಗ ಅರ್ಜಿ ಸಲ್ಲಿಕೆ ಮಾಡಿ

ಸ್ನೇಹಿತರೆ ನಿಮಗೆ ಇದೇ ರೀತಿ ಯಾವಾಗಲೂ ಹೊಸ ಸುದ್ದಿಗಳು ಹಾಗೂ ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳು ಮತ್ತು ಯೋಜನೆಗಳಿಗೆ ಸಂಬಂಧಿಸಿದ ಮಾಹಿತಿಗಳು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ತಕ್ಷಣ

ನಮ್ಮ ವಾಟ್ಸಪ್ ಚಾನೆಲ್ ಸೇರಿಕೊಳ್ಳಲು ಪ್ರಯತ್ನ ಮಾಡಿ

Comments

Leave a Reply

Your email address will not be published. Required fields are marked *