Atal Pension Scheme – ಪ್ರತಿ ತಿಂಗಳು 5000 ಪಿಂಚಣಿ ಸಿಗುತ್ತೆ.! ಅಟಲ್ ಪಿಂಚಣಿ ಯೋಜನೆಗೆ ಈ ರೀತಿ ಅರ್ಜಿ ಸಲ್ಲಿಸಿ
ನಮಸ್ಕಾರ ಗೆಳೆಯರೇ ನಿಮಗೆ ಪ್ರತಿ ತಿಂಗಳು 5000 ಪಿಂಚಣಿ ಪಡೆದುಕೊಳ್ಳಲು ಆಸಕ್ತಿ ಇದೆಯಾ ಹಾಗಾದರೆ ನಿಮಗೆ ಸಿಹಿ ಸುದ್ದಿ ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಅಟಲ್ ಪಿಂಚಣಿ ಯೋಜನೆ ಯ ಮೂಲಕ ಪ್ರತಿ ತಿಂಗಳು ₹5000 ಹಣವನ್ನು ಪಡೆದುಕೊಳ್ಳಬಹುದು ಹಾಗಾಗಿ ನಾವು ಈ ಒಂದು ಲೇಖನಯ ಮೂಲಕ ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿ ತಿಳಿಸಿಕೊಡುತ್ತಿದ್ದೇವೆ.
ಹೌದು ಸ್ನೇಹಿತರೆ, ಈ ಒಂದು ಲೇಖನಿಯ ಮೂಲಕ ಅಟಲ್ ಪಿಂಚಣಿ ಯೋಜನೆ ಎಂದರೆ ಏನು ಹಾಗೂ ಈ ಅಟಲ್ ಪಿಂಚಣಿ ಯೋಜನೆಯ ಲಾಭಗಳೇನು ಹಾಗೂ ಈ ಯೋಜನೆಗೆ ಯಾರು ಅರ್ಜಿ ಸಲ್ಲಿಕೆ ಮಾಡಬಹುದು ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ವಿವರವನ್ನು ತಿಳಿಸಿ ಕೊಡುತ್ತಿದ್ದೇವೆ. ಹಾಗಾಗಿ ನೀವು ಈ ಲೇಖನನ್ನು ಆದಷ್ಟು ಕೊನೆವರೆಗೂ ಓದಲು ಪ್ರಯತ್ನ ಮಾಡಿ
ಅಟಲ್ ಪಿಂಚಣಿ ಯೋಜನೆ (Atal Pension Scheme).?
ಹೌದು ಸ್ನೇಹಿತರೆ ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯ ಮೂಲಕ ಇಳಿ ವಯಸ್ಸಿನಲ್ಲಿ ಆರ್ಥಿಕ ಭದ್ರತೆ ಕಲ್ಪಿಸುವ ಉದ್ದೇಶದಿಂದ ಈ ಒಂದು ಯೋಜನೆಯನ್ನು ಜಾರಿಗೆ ತರಲಾಯಿತು.! ಅಟಲ್ ಪಿಂಚಣಿ ಯೋಜನೆಯನ್ನು ನಮ್ಮ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನೇತೃತ್ವದಲ್ಲಿ 2015 ಜೂನ್ ತಿಂಗಳಿನಲ್ಲಿ ಈ ಒಂದು ಯೋಜನೆಯನ್ನು ಆರಂಭಿಸಲಾಯಿತು ಮತ್ತು ಈ ಒಂದು ಯೋಜನೆ ನಿಯಂತ್ರಿಸಲು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ [PFRDA] ಸ್ಥಾಪಿಸಲಾಯಿತು

ಇದರಿಂದ ವೃದ್ಧಾಪ್ಯ ಜೀವನದಲ್ಲಿ ಯಾವುದೇ ರೀತಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು ಎಂದು ಈ ಒಂದು ಯೋಜನೆಯಲ್ಲಿ ಕಡಿಮೆ ಆದಾಯ ಹೊಂದಿದವರು ತಮ್ಮ ಇಳಿ ವಯಸ್ಸಿನಲ್ಲಿ ಪ್ರತಿ ತಿಂಗಳು 5000 ಪಿಂಚಣಿಯನ್ನು ಪಡೆದುಕೊಳ್ಳಲು ಅವಕಾಶವಿದೆ..
ಹೌದು ಸ್ನೇಹಿತರೆ, ಈ ಒಂದು ಯೋಜನೆ ಇಳಿ ವಯಸ್ಸಿನಲ್ಲಿ ಅಂದರೆ 60 ವರ್ಷ ವಯಸ್ಸಾದ ನಂತರ ಆರ್ಥಿಕ ಭದ್ರತೆ ಕಲ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ..!
ಈ ಯೋಜನೆಯ ಮೂಲಕ ಇಲ್ಲಿವರೆಗೂ ಅಂದರೆ ಕಳೆದ ಏಪ್ರಿಲ್ ತಿಂಗಳವರೆಗೆ ಸುಮಾರು 7.65 ಕೋಟಿಗೂ ಹೆಚ್ಚು ಜನರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಹಾಗೂ ಒಟ್ಟು ಈ ಯೋಜನೆಯ ಮೂಲಕ ಸುಮಾರು 45,974 ಕೋಟಿ ರೂಪಾಯಿ ಎಷ್ಟು ನಿಧಿ ಸಂಗ್ರಹಣೆ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ತಿಳಿಸಿದೆ
ಹೌದು ಸ್ನೇಹಿತರೆ ಅಟಲ್ ಪಿಂಚಣಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರು ಪ್ರತಿ ತಿಂಗಳು ಇಂತಿಷ್ಟು ಹಣ ಹೂಡಿಕೆ ಮಾಡಬೇಕಾಗುತ್ತದೆ ಮತ್ತು ಹೂಡಿಕೆ ಮಾಡಿದ ಹಣದ ಆಧಾರದ ಮೇಲೆ ನಿಮಗೆ ಎಷ್ಟು ಮಾಸಿಕ ಪಿಂಚಣಿ ಬರುತ್ತದೆ ಎಂಬ ವಿವರ ನಿರ್ಧಾರವಾಗುತ್ತದೆ ಹಾಗಾಗಿ ಹೆಚ್ಚಿನ ವಿವರವನ್ನು ಇದೀಗ ತಿಳಿದುಕೊಳ್ಳೋಣ
ಅಟಲ್ ಪಿಂಚಣಿ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಅರ್ಹತೆಗಳು (Atal Pension Scheme Eligibility).?
- 18ರಿಂದ 40 ವರ್ಷದ ಒಳಗಿನವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
- ಈ ಯೋಜನೆಗೆ ಅರ್ಜಿ ಸಲ್ಲಿಸಲು ಮಹಿಳೆಯರು ಹಾಗೂ ದಿನಗೂಲಿ ಕೆಲಸದ ಕಾರ್ಮಿಕರು, ಖಾಸಗಿ ಉದ್ಯೋಗಿಗಳು, ಶ್ರಮಿಕರು ಮತ್ತು ಇತರ ಕೂಲಿ ಕಾರ್ಮಿಕರು ಅರ್ಜಿ ಸಲ್ಲಿಕೆ ಮಾಡಬಹುದು
- ಅಟಲ್ ಪಿಂಚಣಿ ಯೋಜನೆಗೆ ಆದಾಯ ತೆರಿಗೆ ಪಾವತಿ ಮಾಡದಂತ (Apply online) ಭಾರತೀಯ ಎಲ್ಲಾ ನಾಗರಿಕರು ಅರ್ಜಿ ಸಲ್ಲಿಸಲು ಅವಕಾಶವಿದೆ
- ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಜಿದಾರರು ಕಡ್ಡಾಯವಾಗಿ ಬ್ಯಾಂಕ್ ಖಾತೆ ಅದು ಪೋಸ್ಟ್ ಬ್ಯಾಂಕ್ ಖಾತೆ ಹೊಂದಿರಬೇಕು
ಅಟಲ್ ಪಿಂಚಣಿ ಯೋಜನೆಗೆ ಎಷ್ಟು ಹಣ ಪಾವತಿಸಬೇಕು..?
ಸ್ನೇಹಿತರೆ ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಎಷ್ಟು ಪ್ರಮಾಣದ ಹಣ ಹೂಡಿಕೆ ಮಾಡುತ್ತೀರಿ ಅದರ ಮೇಲೆ ನೀವು ಪ್ರತಿ ತಿಂಗಳು 1,000, 2,000, 3,000, 4,000, ಮತ್ತು 5000 ಈ ರೀತಿ ವಿವಿಧ ರೀತಿಯ ಪಿಂಚಣಿಯನ್ನು ಪಡೆದುಕೊಳ್ಳಬಹುದು ಹಾಗಾಗಿ ಇದಕ್ಕೆ ಸಂಬಂಧಿಸಿದ ವಿವರ ತಿಳಿದುಕೊಳ್ಳೋಣ
ಸ್ನೇಹಿತರೆ ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೇನೆಂದರೆ, ನೀವು ಎಷ್ಟು ವಯಸ್ಸಿನಲ್ಲಿ ಹಣ ಹೂಡಿಕೆ ಮಾಡುತ್ತೀರಿ ಎಂಬ ಆಧಾರದ ಮೇಲೆ ನಿಮಗೆ ಪಿಂಚಣಿ ನಿರ್ಧಾರ ಆಗುತ್ತದೆ ಹಾಗೂ ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬ ಹಣದ ಮೊತ್ತವು ಕೂಡ ನಿರ್ಧಾರವಾಗುತ್ತದೆ
ಆದ್ದರಿಂದ ನಾವು ಅಂದಾಜು 18ನೇ ವಯಸ್ಸಿನಲ್ಲಿ ನೀವು ಈ ಯೋಜನೆಗೆ ಸೇರ್ಪಡೆಯಾದರೆ ಎಷ್ಟು ಹಣ ಹೂಡಿಕೆ ಮಾಡಬೇಕು ಎಂಬ ಮಾಹಿತಿಯನ್ನು ತಿಳಿಸಿ ಕೊಡುತ್ತಿದ್ದೇವೆ
- ತಿಂಗಳಿಗೆ 42 ರೂಪಾಯಿ ಪಾವತಿಸಿದರೆ ₹1,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ 84 ರೂಪಾಯಿ ಪಾವತಿಸಿದರೆ ₹2,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ 125 ರೂಪಾಯಿ ಪಾವತಿಸಿದರೆ ₹3,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ 168 ರೂಪಾಯಿ ಪಾವತಿಸಿದರೆ ₹4,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ 210 ರೂಪಾಯಿ ಪಾವತಿಸಿದರೆ ₹5,000 ಪಿಂಚಣಿ ಸಿಗುತ್ತೆ
ಅದೇ ರೀತಿ ನೀವು 40ನೇ ವರ್ಷದ ವಯಸ್ಸಿನಲ್ಲಿ ನೀವು ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದರೆ ಎಷ್ಟು ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕು ಎಂಬ ವಿವರ ನಾವು ಕೆಳಗಡೆ ವಿವರಿಸಿದ್ದೇವೆ
- ತಿಂಗಳಿಗೆ 291 ರೂಪಾಯಿ ಪಾವತಿಸಿದರೆ ₹1,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ ₹582 ರೂಪಾಯಿ ಪಾವತಿಸಿದರೆ ₹2,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ ₹873 ರೂಪಾಯಿ ಪಾವತಿಸಿದರೆ ₹3,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ ₹1,164 ರೂಪಾಯಿ ಪಾವತಿಸಿದರೆ ₹4,000 ಪಿಂಚಣಿ ಸಿಗುತ್ತೆ
- ತಿಂಗಳಿಗೆ ₹1,454 ರೂಪಾಯಿ ಪಾವತಿಸಿದರೆ ₹5,000 ಪಿಂಚಣಿ ಸಿಗುತ್ತೆ
ತಿಂಗಳಿಗೆ ಕಂತಿನ ಹಣ ಪಾವತಿ ಮಾಡುವುದು ಹೇಗೆ..?
ಸ್ನೇಹಿತರೆ ನೀವು ಪ್ರತಿ ತಿಂಗಳು ಅಟಲ್ ಪಿಂಚಣಿ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವುದು ಹೇಗೆ ಎಂಬ ಸಂದೇಹ ನಿಮಗೆ ಕಾಡಬಹುದು.! ಅಟಲ್ ಪಿಂಚಣಿ ಯೋಜನೆಯ ಪ್ರಕಾರ ನೀವು ಪ್ರತಿ ತಿಂಗಳು ಅಥವಾ ತ್ರೈಮಾಸಿಕ, ಅಥವಾ ಅರ್ಧ ವಾರ್ಷಿಕ ಇತರ ಮೂರು ರೀತಿಯಲ್ಲಿ ನೀವು ಈ ಒಂದು ಯೋಜನೆಯಡಿಯಲ್ಲಿ ಹೂಡಿಕೆ ಮಾಡಬಹುದು
ಹಾಗಾಗಿ ನಿಮಗೆ ಎಷ್ಟು ಕಂತಿನ ಹಣ ಹೂಡಿಕೆ ಮಾಡಲು ಶಕ್ತಿ ಇರುತ್ತದೆ ಇದರ ಅನುಗುಣವಾಗಿ ನೀವು ಪ್ರತಿ ತಿಂಗಳು ಅಥವಾ ನಾಲ್ಕು ತಿಂಗಳಿಗೊಮ್ಮೆ ಅಥವಾ ಆರು ತಿಂಗಳಿಗೊಮ್ಮೆ ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆಯ ಮೊತ್ತ ಹಣವನ್ನು ಹಾಕಬಹುದು
ನೀವು ಕನಿಷ್ಠ ಈ ಒಂದು ಯೋಜನೆಯಲ್ಲಿ 20 ವರ್ಷಗಳ ಕಾಲ ನಿಷ್ಠೆಯಿಂದ ಹೂಡಿಕೆ ಮಾಡಬೇಕಾಗುತ್ತದೆ ನಂತರ ಯಾವುದೇ ಅನಿವಾರ್ಯ ಕಾರಣಗಳಿಂದ ಈ ಯೋಜನೆಯಿಂದ ತ್ಯಜಿಸಿದರೆ ಅಥವಾ ಹೂಡಿಕೆ ಮಾಡಲು ಸಾಧ್ಯವಾಗದಿದ್ದರೆ ನೀವು ಇಲ್ಲಿವರೆಗೂ ಪಾವತಿಸಿದ ಹಣ ಮತ್ತು ಬಡ್ಡಿಯನ್ನು ಮಾತ್ರ ಪಡೆದುಕೊಳ್ಳಲು ಅವಕಾಶ ಇರುತ್ತದೆ
ಪ್ರತಿ ತಿಂಗಳು 5000 ಪಿಂಚಣಿ ಹೇಗೆ ಪಡೆಯುವುದು ಹಾಗೂ ಇದರ ಉಪಯೋಗಗಳು..?
- ಸ್ನೇಹಿತರೆ ನೀವು ಈ ಒಂದು ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ನಂತರ 60 ವರ್ಷ ವಯಸ್ಸು ತಲುಪಿದಾಗ ನಿಮಗೆ ಪ್ರತಿ ತಿಂಗಳು ಪಿಂಚಣಿ ಸಿಗುತ್ತದೆ
- ಅಟಲ್ ಪಿಂಚಣಿ ಯೋಜನೆ ಅಡಿಯಲ್ಲಿ ಹೂಡಿಕೆ ಮಾಡಿದ ಅರ್ಜಿದಾರರು ನಿಧನವಾದರೆ ಅಂತ ಸಂದರ್ಭದಲ್ಲಿ ಅರ್ಜಿದಾರರ ಪತ್ನಿ ಅಥವಾ ಪತಿಗೆ ಪಿಂಚಣಿ ಹಣ ಪಡೆದುಕೊಳ್ಳಲು ಅವಕಾಶವಿರುತ್ತದೆ
- ಅಟಲ್ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಿದ ಅರ್ಜಿದಾರರ ನಿಧಾನವಾದರೂ ಮತ್ತು ಸಂಗಾತಿಯು ನಿಧನವಾದರೆ ಅಂತ ಸಂದರ್ಭದಲ್ಲಿ ಪಿಂಚಣಿಯ ಹಣವನ್ನು ಕುಟುಂಬದ ಸದಸ್ಯರಿಗೆ ಅಥವಾ ಅಟಲ್ ಪಿಂಚಣಿ ಯೋಜನೆಯ ನಾಮಿನಿಗೆ ಹೂಡಿಕೆ ಮಾಡಿದ ಹಣ ಮತ್ತು ಬಡ್ಡಿ ವರ್ಗಾವಣೆ ಮಾಡಲಾಗುತ್ತದೆ
ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ (How To Apply Atal Pension Scheme).?
ಸ್ನೇಹಿತರೆ ನೀವು ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದಾರೆ ನೀವು ನಿಮ್ಮ ಹತ್ತಿರದ ಯಾವುದೇ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು ಅಥವಾ ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದು
ಹಾಗಾಗಿ ಅಟಲ್ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಲು ತೆಗೆದುಕೊಂಡು ಹೋಗಬೇಕಾದ ದಾಖಲಾತಿಗಳು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆದಾಯ ಪ್ರಮಾಣ ಪತ್ರ, ಇತರೆ ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಭೇಟಿ ನೀಡಿ ಅರ್ಜಿ ಸಲ್ಲಿಸಿ
ಸ್ನೇಹಿತರೆ ಈ ಒಂದು ಯೋಜನೆಯ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ ಮೂಲಕ ತಿಳಿದುಕೊಳ್ಳಿ ಅಥವಾ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿ ಪ್ರತಿದಿನ ಉಪಯುಕ್ತ ಮಾಹಿತಿಗಳು ಪಡೆದುಕೊಳ್ಳಲು ನಮ್ಮ ವಾಟ್ಸಾಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನಲ್ ಗಳಿಗೆ ಭೇಟಿ ನೀಡಬಹುದು
ಗೃಹಲಕ್ಷ್ಮಿ ಯೋಜನೆ: ಇನ್ನು ಮಹಿಳೆಯರಿಗೆ ಎಷ್ಟು ಕಂತಿನ ಹಣ ಬಾಕಿ ಇದೆ.! ಯಾವಾಗ ಜಮಾ ಆಗುತ್ತೆ, ಇಲ್ಲಿದೆ ಮಾಹಿತಿ