Ration Card Application – ಹೊಸ ರೇಷನ್ ಕಾರ್ಡ್ ಅರ್ಜಿ ಮತ್ತೆ ಆರಂಭ.! ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ವಿವರಗಳು
ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ಎಂಬುದು ಅತ್ಯಂತ ಒಂದು ಪ್ರಮುಖ ದಾಖಲಾತಿಯಾಗಿದೆ ಈ ಒಂದು ದಾಖಲಾತಿ ಸರಕಾರದ ಹಲವಾರು ಯೋಜನೆಗಳ ಲಾಭ ಪಡೆಯಲು ಸಹಾಯವಾಗುತ್ತದೆ ಅಷ್ಟೇ ಅಲ್ಲದೆ ಸರಕಾರದಿಂದ ಸಬ್ಸಿಡಿ ಸ್ಕೀಮ್ ಹಾಗೂ ಉಚಿತ ಪಡಿತರ ಮುಂತಾದ ಸೌಲಭ್ಯವನ್ನು ರೇಷನ್ ಕಾರ್ಡ್ ಮೂಲಕ ಪಡೆಯಬಹುದು ಹಾಗಾಗಿ ತುಂಬಾ ಜನರು ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ ಅಂತವರಿಗೆ ಇದೀಗ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಇದಕ್ಕೆ ಸಂಬಂಧಿಸಿದ ವಿವರ ತಿಳಿಯೋಣ
ರೇಷನ್ ಕಾರ್ಡ್ ಅರ್ಜಿ ಸಲ್ಲಿಕೆ ಆರಂಭ..?
ಹೌದು ಸ್ನೇಹಿತರೆ ಇತ್ತೀಚಿಗೆ ರಾಜ್ಯದಲ್ಲಿ ನಕಲಿ ರೇಷನ್ ಕಾರ್ಡ್ ಗಳ ಪತ್ತೆ ಹಚ್ಚುವಿಕೆ ಕಾರ್ಯ ಬರದಿಂದ ಸಾಗುತ್ತಿದೆ ಹಾಗೂ ಆಹಾರ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ ಇಲ್ಲಿವರೆಗೂ ಸುಮಾರು 12 ಲಕ್ಷಕ್ಕಿಂತ ಹೆಚ್ಚು ಪಡಿತರ ಚೀಟಿಗಳನ್ನು ನಕಲಿ ರೇಷನ್ ಕಾರ್ಡ್ ಗಳೆಂದು ಗುರುತು ಮಾಡಿ ರದ್ದು ಮಾಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು ಇದರ ನಡುವೆ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ ಮಾಡಿಕೊಡಲಾಗಿದೆ

ಹೌದು ಸ್ನೇಹಿತರೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 5 ಮತ್ತು ಸೆಪ್ಟೆಂಬರ್ 6 ನೇ ತಾರೀಖಿನಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:00 ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿತ್ತು.! ಆದರೆ ಇದರ ಬಗ್ಗೆ ಯಾವುದೇ ರೀತಿ ಮಾಹಿತಿ ತುಂಬಾ ಜನರಿಗೆ ಗೊತ್ತಿಲ್ಲ..
ಮತ್ತೆ ಇದೀಗ ರಾಜ್ಯ ಸರ್ಕಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12:00 ವರೆಗೆ ಹೊಸ ಪಡಿತರ ಚೀಟಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವವರಿಗೆ ಇಂದು ಕೊನೆಯ ದಿನಾಂಕವಾಗಿದೆ ಮತ್ತು ಈ ದಿನಾಂಕವು ವಿಸ್ತರಣೆ ಆಗಬಹುದು ಹಾಗಾಗಿ ಹೆಚ್ಚಿನ ಮಾಹಿತಿ ಸಿಕ್ಕ ನಂತರ ನಾವು ಮತ್ತೆ ನಿಮಗೆ ಹೊಸ ಲೇಖನ ಮೂಲಕ ಮಾಹಿತಿ ತಿಳಿಸುತ್ತೇವೆ
ಆದ್ದರಿಂದ ನೀವು ಅರ್ಜಿ ಸಲ್ಲಿಕೆ ಮಾಡಲು ಬಯಸುತ್ತಿದ್ದರೆ ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು..?
- ಅರ್ಜಿದಾರರು ಕರ್ನಾಟಕದ ಕಾಯಂ ನಿವಾಸಿಗಳಾಗಿರಬೇಕು
- ಅರ್ಜಿದಾರರು ಈ ಹಿಂದೆ ಯಾವುದೇ ರೀತಿ ಪಡಿತರ ಚೀಟಿ ಹೊಂದಿರಬಾರದು
- ಅರ್ಜಿದಾರರು ಹೊಸದಾಗಿ ಮದುವೆಯಾದರೆ ಅಥವಾ ನವದಂಪತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ
- ಅರ್ಜಿದಾರರು ಕುಟುಂಬದ ವಾರ್ಷಿಕ (annual income) ಆದಾಯ INR 1.20 ಲಕ್ಷ ರೂಪಾಯಿ ಒಳಗಡೆ ಇರಬೇಕು
- ಅರ್ಜಿದಾರರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಇರುವ ಎಲ್ಲಾ ನಿಯಮಗಳನ್ನು ಹಾಗೂ ಅರ್ಹತೆಗಳನ್ನು ಹೊಂದಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳ ವಿವರ..?
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ಮೊಬೈಲ್ ಸಂಖ್ಯೆ
- ಆರು ವರ್ಷದ ಒಳಗಿನ ಮಕ್ಕಳಿಗೆ ಜನನ ಪ್ರಮಾಣ ಪತ್ರ
- ಇತರೆ ಅಗತ್ಯ ದಾಖಲಾತಿಗಳು
ಅರ್ಜಿ ಸಲ್ಲಿಸುವುದು ಹೇಗೆ..?
ಹೊಸ ಪಡಿತರ ಚೀಟಿಗೆ ಆನ್ಲೈನ್ ಅಥವಾ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.! ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಆನ್ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಮತ್ತು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬೇಕಾಗುವ ಲೀಗ್ ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತ ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ತಕ್ಷಣ ನಮ್ಮ ವಾಟ್ಸಪ್ ಚಾನೆಲ್ಗಳಿಗೆ ಸೇರಿಕೊಳ್ಳಬಹುದು