Ganga Kalyan Yojana; – ಗಂಗಾ ಕಲ್ಯಾಣ ಯೋಜನೆ ಅರ್ಜಿ ಪ್ರಾರಂಭ.! ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ
ನಮಸ್ಕಾರ ಗೆಳೆಯರೇ ಇದೀಗ ಕರ್ನಾಟಕದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ರಾಜ್ಯ ಸರ್ಕಾರ ವತಿಯಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ.! ಹೌದು ಸ್ನೇಹಿತರೆ, ಜಮೀನಿನಲ್ಲಿ ಬೋರೆಲ್ ಕೊರೆಸಲು ರಾಜ್ಯ ಸರ್ಕಾರ ವತಿಯಿಂದ ಸುಮಾರು 4.5 ಲಕ್ಷ ವರೆಗೆ ಸಬ್ಸಿಡಿ ಅಥವಾ ಸಹಾಯಧನ ಇದೀಗ ನೀಡುತ್ತಿದೆ ಹಾಗಾಗಿ ಆಸಕ್ತಿ ಇರುವವರು ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗಂಗಾ ಕಲ್ಯಾಣ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು
ಹಾಗಾಗಿ ನಾವು ಈ ಒಂದು ಲೇಖನ ಮೂಲಕ ಗಂಗಾ ಕಲ್ಯಾಣ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು ಹಾಗೂ ಅರ್ಜಿ ಸಲ್ಲಿಸಲು ಇರುವ ಕೊನೆಯ ದಿನಾಂಕ ಯಾವಾಗ ಮತ್ತು ಯಾವ ರೈತರು ಅರ್ಜಿ ಸಲ್ಲಿಕೆ ಮಾಡಬೇಕು ಹಾಗೂ ರೈತರು ಅರ್ಜಿ ಸಲ್ಲಿಸಲು ಹೊಂದಿರಬೇಕಾದ ಅರ್ಹತೆಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ
ಗಂಗಾ ಕಲ್ಯಾಣ ಯೋಜನೆ ಅರ್ಜಿ ಪ್ರಾರಂಭ (Ganga Kalyan Yojana).?
ಹೌದು ಸ್ನೇಹಿತರೆ ರಾಜ್ಯದ ರೈತರಿಗೆ ಇದೀಗ ಸರ್ಕಾರ ಕಡೆಯಿಂದ ಭರ್ಜರಿ ಗುಡ್ ನ್ಯೂಸ್ ನೀಡಲಾಗಿದೆ ಏಕೆಂದರೆ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವಿವಿಧ ನಿಗಮಗಳ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಬಡ ರೈತ ಕುಟುಂಬಗಳಿಗೆ ತಮ್ಮ ಜಮೀನಿನಲ್ಲಿ ಕೊಳವೆ ಭಾವಿ ಕೋರಿಸಲು ಆರ್ಥಿಕ ಸಹಾಯ ಧನ ರಾಜ್ಯ ಸರ್ಕಾರ ನೀಡುತ್ತಿದೆ..

ಹೌದು ಸ್ನೇಹಿತರೆ, ರಾಜ್ಯದ ರೈತರು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹಾಗೂ ರೈತರ ಆದಾಯವನ್ನು ಹೆಚ್ಚು ಮಾಡುವ ಉದ್ದೇಶದಿಂದ ಮತ್ತು ತೋಟಗಾರಿಕಾ ಬೆಳೆಗಳಿಗೆ ಒಳ್ಳೆಯ ನೀರಾವರಿ ಸೌಲಭ್ಯ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಗಂಗಾ ಕಲ್ಯಾಣ ಯೋಜನೆ ಜಾರಿಗೆ ತಂದಿದೆ ಇದೀಗ ಈ ಒಂದು ಯೋಜನೆಯ ಮೂಲಕ ರೈತರಿಗೆ ಕೊಳವೆ ಭಾವಿ ಕೋರಿಸಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಮಾಡಿಕೊಡಲಾಗಿದೆ ಹಾಗಾಗಿ ಆಸಕ್ತಿ ಇರುವ ರೈತರು ಬೇಗ ಅರ್ಜಿ ಸಲ್ಲಿಕೆ ಮಾಡಿ
ಕೊಳವೆ ಭಾವಿ ಕೋರಿಸಲು (Ganga Kalyan Yojana) ರೈತರು ಹೊಂದಿರಬೇಕಾದ ಅರ್ಹತೆಗಳು..?
ರೈತರು ಕೊಳವೆ ಭಾವಿ ತಮ್ಮ ಜಮೀನಿನಲ್ಲಿ ಕೋರಿಸಲು ಕಡ್ಡಾಯವಾಗಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಕೆಲವೊಂದು ಅರ್ಹತೆಗಳನ್ನು ಹೊಂದಿರಬೇಕು ಹಾಗಾಗಿ ಅರ್ಹತೆಗಳಿಗೆ ಸಂಬಂಧಿಸಿದ ವಿವರಗಳು ನಾವು ಕೆಳಗಡೆ ನೀಡಿದ್ದೇವೆ
ರೈತರು ನಮ್ಮ ಕರ್ನಾಟಕದಲ್ಲಿ ವಾಸ ಮಾಡುತ್ತಿರಬೇಕು ಹಾಗೂ ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕು
ರೈತರು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬರುವ ವಿವಿಧ ನಿಗಮಗಳಿಗೆ ಸಂಬಂಧಪಟ್ಟ ವರ್ಗಕ್ಕೆ ಸೇರಿದ ರೈತರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ
ರೈತರು ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಈ ಹಿಂದೆ ಅರ್ಜಿ ಸಲ್ಲಿಸಿ ಲಾಭ ಪಡೆದಿರಬಾರದು
ಈ ಯೋಜನೆಗೆ ಅರ್ಜಿ (1.20 ರಿಂದ 5.00 ಎಕರೆ ಒಳಗಡೆ ಜಮೀನು ಹೊಂದಿರಬೇಕು) ಸಲ್ಲಿಸಲು ಬಯಸುವ ರೈತರು ಸಣ್ಣ ಮತ್ತು ಅತಿ ಸಣ್ಣ ರೈತರು ಆಗಿರಬೇಕು
ಈ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ರೈತರ ವಯಸ್ಸು ಕನಿಷ್ಠ 21 ವರ್ಷ ಪೂರ್ಣಗೊಂಡಿರಬೇಕಾಗುತ್ತದೆ
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಕೆ ಮಾಡಲು ಬಯಸುವ ರೈತರು ಕುಟುಂಬದಲ್ಲಿ ಯಾವುದೇ ಸರಕಾರಿ ನೌಕರಿ ಹೊಂದಿರಬಾರದು
ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಬಯಸುವ ರೈತರು ವಿಕಲಚೇತನರು ಹಾಗೂ ಅಂಗವಿಕಲರು ಆಗಿದ್ದರೆ ಅಂತವರು ಸಂಬಂಧಪಟ್ಟ ದೃಢೀಕರಣ ಪ್ರಮಾಣ ಪತ್ರ ಸಲ್ಲಿಸಬೇಕು
ರೈತರ ವಾರ್ಷಿಕ ಆದಾಯವು 1.5 ಲಕ್ಷ ರೂಪಾಯಿ ಗ್ರಾಮೀಣ ಭಾಗದ ರೈತರು ಹಾಗೂ 2 ಲಕ್ಷ ರೂಪಾಯಿ ನಗರ ಪ್ರದೇಶದ ರೈತರು ಹೊಂದಿರಬೇಕಾಗುತ್ತದೆ
ಗಂಗಾ ಕಲ್ಯಾಣಿ ಯೋಜನೆಯಡಿ (Ganga Kalyan Yojana Subsidy amount) ಎಷ್ಟು ಸಬ್ಸಿಡಿ ಹಣ ಸಿಗುತ್ತೆ..?
ಸ್ನೇಹಿತರ ನಮ್ಮ ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಈ ಗಂಗಾ ಕಲ್ಯಾಣ ಯೋಜನೆಯ ಮೂಲಕ ವಿವಿಧ ನಿಗಮಗಳ ಮೂಲಕ ರೈತರು ಕೊಳವೆ ಭಾವಿ ಕೊರಿಸಲು ಹಾಗೂ ಪಂಪ್ಸೆಟ್ ಅಳವಡಿಸಲು ರಾಜ್ಯ ಸರ್ಕಾರ ಸಬ್ಸಿಡಿ ನೀಡುತ್ತಿದೆ.!
ರಾಜ್ಯ ಸರ್ಕಾರ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಮತ್ತು ಚಿಕ್ಕಬಳ್ಳಾಪುರ ಹಾಗೂ ತುಮಕೂರು ಮತ್ತು ರಾಮನಗರ ಜಿಲ್ಲೆಯಲ್ಲಿ ರೈತರು ಈ ಒಂದು ಯೋಜನೆಯ ಮೂಲಕ ಅರ್ಜಿ ಸಲ್ಲಿಕೆ ಮಾಡಿದರೆ ಸರಿಸುಮಾರು 4.75 ಲಕ್ಷ ರೂಪಾಯಿವರೆಗೆ ಸಬ್ಸಿಡಿ ಹಣ ನೀಡಲಾಗುತ್ತದೆ ಮತ್ತು (Loan Amount) ಇದರಲ್ಲಿ ₹50,000/- ರೂಪಾಯಿವರೆಗೆ (Loan) ಸಾಲ ಸೌಲಭ್ಯ ನೀಡಲಾಗುತ್ತದೆ ಹಾಗಾಗಿ ಈ ಯೋಜನೆ ಮೂಲಕ 4.25 ಲಕ್ಷ (Subsidy) ರೂಪಾಯಿವರೆಗೆ ಸಹಾಯಧನ ಪಡೆಯಬಹುದು
ಗಂಗಾ ಕಲ್ಯಾಣ (Ganga Kalyan) ಯೋಜನೆ ಮೂಲಕ ನಮ್ಮ ಕರ್ನಾಟಕದ ಇತರ ಜಿಲ್ಲೆಗಳಲ್ಲಿ ಇರುವಂತ (former) ರೈತರಿಗೆ ಬೋರ್ವೆಲ್ ಕೊರಿಸಲು 3.75 ಲಕ್ಷ (Subsidy) ರೂಪಾಯಿ ಸರ್ಕಾರ ನೀಡುತ್ತದೆ ಇದರಲ್ಲಿ ₹50,000 ಸಾಲ (Loan Amount) ಒಳಗೊಂಡಿರುತ್ತದೆ ಹಾಗೂ 3.25 ಲಕ್ಷ (Subsidy Amount) ರೂಪಾಯಿ ಈ ಯೋಜನೆ ಮೂಲಕ ಸಬ್ಸಿಡಿ ಸಿಗುತ್ತದೆ.! ಹಾಗಾಗಿ ಇನ್ನಷ್ಟು ಹೆಚ್ಚಿನ ವಿವರ ಪಡೆದುಕೊಳ್ಳಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
ಗಂಗಾ ಕಲ್ಯಾಣ ಯೋಜನೆಗೆ (Ganga Kalyan Yojana apply documents) ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು..?
- ರೈತರ ಆಧಾರ್ ಕಾರ್ಡ್
- ರೈತರ ಜಮೀನು ಪ್ರಮಾಣ ಪತ್ರ (RTC/ಪಹಣಿ)
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ರೇಷನ್ ಕಾರ್ಡ್
- ಸಣ್ಣ ಮತ್ತು ಅತಿ ಸಣ್ಣ ರೈತರ ಹಿಡುವಳಿ ಪ್ರಮಾಣ ಪತ್ರ
- ವಿಕಲಚೇತನರಾಗಿದ್ದರೆ ಸಂಬಂಧಪಟ್ಟ ದಾಖಲಾತಿ ಪ್ರಮಾಣ ಪತ್ರ
- ವೋಟರ್ ಐಡಿ
- ನೀರು ಬಳಕೆಯ ಪ್ರಮಾಣ ಪತ್ರ
- ಕಚ್ಚಾ ನಕ್ಷೆ
- ಇತರೆ ಅಗತ್ಯ ದಾಖಲಾತಿಗಳು
ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ(Ganga Kalyan Yojana apply online)..?
ಸ್ನೇಹಿತರೆ ನೀವು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ಎರಡು ರೀತಿಯ ಆಯ್ಕೆಗಳು ನಿಮ್ಮ ಮುಂದೆ ಇವೆ. ಮೊದಲನೇದಾಗಿ ನೀವು ಮೇಲೆ ಕೊಟ್ಟಿರುವಂತಹ ಎಲ್ಲಾ ದಾಖಲಾತಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಯಾವುದೇ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು
ಮತ್ತೆ ಎರಡನೇ ಆಯ್ಕೆ ಕರ್ನಾಟಕ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಸೇವಾ ಸಿಂಧು ಆನ್ಲೈನ್ ಪೋರ್ಟಲ್ ಮೂಲಕ ನೀವು ಅರ್ಜಿ ಸಲ್ಲಿಕೆ ಮಾಡಬಹುದು ಹಾಗಾಗಿ ನಾವು ಅರ್ಜಿ ಸಲ್ಲಿಸಲು ಬೇಕಾಗುವ ಲಿಂಕ್ ಕೆಳಗಡೆ ನೀಡಿದ್ದೇವೆ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
ಸ್ನೇಹಿತರೆ ಮೇಲಗಡೆ ಕೊಟ್ಟಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು ಮತ್ತು ಇದೇ ರೀತಿ ಪ್ರತಿದಿನ ಮಾಹಿತಿಗಳನ್ನು ಪಡೆದುಕೊಳ್ಳಲು ಆಸಕ್ತಿ ಇದ್ದರೆ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಭೇಟಿ ನೀಡಬಹುದು