ಗೃಹಲಕ್ಷ್ಮಿ ಯೋಜನೆ: ಇನ್ನು ಮಹಿಳೆಯರಿಗೆ ಎಷ್ಟು ಕಂತಿನ ಹಣ ಬಾಕಿ ಇದೆ.! ಯಾವಾಗ ಜಮಾ ಆಗುತ್ತೆ, ಇಲ್ಲಿದೆ ಮಾಹಿತಿ
ನಮಸ್ಕಾರ ಗೆಳೆಯರೇ ಕರ್ನಾಟಕದ ಮಹಿಳೆಯರಿಗೆ ಆರ್ಥಿಕವಾಗಿ ಬೆಂಬಲ ನೀಡುವ ಉದ್ದೇಶದಿಂದ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಕಾಂಗ್ರೆಸ್ ಪಕ್ಷ ಗೃಹಲಕ್ಷ್ಮಿ ಯೋಜನೆಯನ್ನು ಪರಿಚಯ ಮಾಡಿದೆ ಮತ್ತು ಈ ಒಂದು ಯೋಜನೆ ಮೂಲಕ ಲಕ್ಷಾಂತರ ಮಹಿಳೆಯರಿಗೆ ಈಗಾಗಲೇ ಆರ್ಥಿಕ ನೆರವು ನೀಡುತ್ತಿದೆ ಇದರಿಂದ ಮಹಿಳೆಯರ ಆರ್ಥಿಕ ಸಬಲೀಕರಣ ಮಾಡುವ ಉದ್ದೇಶ ಹೊಂದಲಾಗಿದೆ..
ನಾವು ಈ ಒಂದು ಲೇಖನ ಮೂಲಕ ಗೃಹಲಕ್ಷ್ಮಿ ಯೋಜನೆ ಎಂದರೆ ಏನು ಹಾಗೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಮಹಿಳೆಯರಿಗೆ ಇನ್ನೂ ಎಷ್ಟು ಕಂತಿನ ಹಣ ಜಮಾ ಆಗುವುದು ಬಾಕಿ ಇದೆ ಹಾಗೂ ಹಣ ಬಿಡುಗಡೆ ಯಾವಾಗ ಆಗುತ್ತೆ ಎಂಬ ಮಾಹಿತಿಗೆ ಸಂಬಂಧಿಸಿದಂತೆ ಸಂಪೂರ್ಣ ವಿವರವನ್ನು ನಾವು ಈ ಒಂದು ಲೇಖನಯ ಮೂಲಕ ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ಈ ಲೇಖನನ್ನು ಕೊನೆವರೆಗೂ ಓದಿ
ಗೃಹಲಕ್ಷ್ಮಿ ಯೋಜನೆ ಎಂದರೆ ಏನು..?
ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಉದ್ದೇಶದಿಂದ ಕರ್ನಾಟಕದ ಜನತೆಗೆ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿತು ಈ ಒಂದು ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಕೂಡ ಒಂದು ಗ್ಯಾರಂಟಿ ಯೋಜನೆಯಾಗಿದೆ ಮತ್ತು ಈ ಯೋಜನೆಯ ಮೂಲಕ ಅರ್ಜಿ ಸಲ್ಲಿಸಿದ ಕುಟುಂಬದ ಮನೆಯ ಯಜಮಾನಿಗೆ ರೂ. 2000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುವಂತಹ ಯೋಜನೆಯಾಗಿದೆ

ಗೃಹಲಕ್ಷ್ಮಿ ಯೋಜನೆಯ ಮೂಲಕ ಇಲ್ಲಿವರೆಗೂ ಮಹಿಳೆಯರು ಸುಮಾರು 21ನೇ ಕಂತಿನ ಹಣದವರೆಗೆ ಅಂದರೆ ಏಪ್ರಿಲ್ ತಿಂಗಳ ಕಂತಿನ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು ಹಾಗೂ ಈ ಒಂದು ಯೋಜನೆ ಮೂಲಕ ಮಹಿಳೆಯರು ಇಲ್ಲಿವರೆಗೂ ಸುಮಾರು 42,000 ಹಣ ಎಲ್ಲ ಮಹಿಳೆಯರು ಪಡೆದುಕೊಂಡಿದ್ದಾರೆ ಎಂದು ಹೇಳಬಹುದು.
ಇನ್ನೂ ಕೆಲ ಮಹಿಳೆಯರಿಗೆ ಇನ್ನೂ ಹಲವಾರು ಕಂತಿನ ಹಣ ಬಾಕಿ ಇದೆ ಹಾಗಾಗಿ ಇನ್ನು ಮಹಿಳೆಯರಿಗೆ ಎಷ್ಟು ಕಂತಿನ ಹಣ ಜಮಾ ಆಗಬೇಕು ಎಂಬ ವಿವರವನ್ನು ತಿಳಿದುಕೊಳ್ಳೋಣ
ಗೃಹಲಕ್ಷ್ಮಿ ಯೋಜನೆಯ ಇನ್ನು ಎಷ್ಟು ಕಂತಿನ ಹಣ ಮಹಿಳೆಯರಿಗೆ ಬಾಕಿ ಇದೆ..?
ಸ್ನೇಹಿತರೆ ಇಲ್ಲಿ ಗಮನಿಸುವುದಾದರೆ ಇಲ್ಲಿವರೆಗೂ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದ ನಂತರ ಸುಮಾರು ಅಂದರೆ ಏಪ್ರಿಲ್ 2025 ರವರೆಗೆ ಮಹಿಳೆಯರ ಖಾತೆಗೆ ಜಮಾ ಆಗಿದೆ ಎಂದು ಮಾಹಿತಿ ತಿಳಿದು ಬಂದಿದೆ..!
ಮತ್ತು ಕೆಲ ಮಹಿಳೆಯರಿಗೆ ಇನ್ನೂ ಕೆಲ ಮಹಿಳೆಯರಿಗೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಕಂತಿನ ಹಣ ಜಮಾ ಆಗಿಲ್ಲ ಎಂದು ಕೆಲ ಮಹಿಳೆಯರು ವರದಿ ಮಾಡುತ್ತಿದ್ದಾರೆ..
ಹೌದು ಸ್ನೇಹಿತರೆ ಏಪ್ರಿಲ್ ತಿಂಗಳ ಕಂತಿನ ಹಣವನ್ನು ಇದೆ ಆಗಸ್ಟ್ 8ನೇ ತಾರೀಖಿನಂದು ಮಹಿಳೆಯರ ಖಾತೆಗೆ ಜಮಾ ಮಾಡಲಾಯಿತು ಮತ್ತು ಇಲ್ಲಿವರೆಗೂ ಸಾಕಷ್ಟು ಮಹಿಳೆಯರು ಈಗಾಗಲೇ ಹಣ ಪಡೆದುಕೊಂಡಿದ್ದಾರೆ.!
ಹೌದು ಸ್ನೇಹಿತರೆ 21ನೇ ಕಂತಿನ ಹಣ ಅರ್ಜಿ ಸಲ್ಲಿಸಿದ ಮಹಿಳೆಯರ ಪೈಕಿ ಸುಮಾರು 90% ಮಹಿಳೆಯರ ಖಾತೆಗೆ ಈಗಾಗಲೇ ವರ್ಗಾವಣೆ ಆಗಿದೆ ಹಾಗೂ ಕೆಲ ಮಹಿಳೆಯರ ಖಾತೆಗೆ ಶೀಘ್ರದಲ್ಲೇ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ ಹಾಗಾಗಿ ಹಣ ಬರುವವರೆಗೂ ಮಹಿಳೆಯರು ತಾಳ್ಮೆಯಿಂದ ಕಾಯಬೇಕು
ಈಗ ವಿಷಯಕ್ಕೆ ಬರುವುದಾದರೆ ಮಹಿಳೆಯರಿಗೆ ಇನ್ನೂ ಮೇ ತಿಂಗಳ ಹಣ ಹಾಗೂ ಜೂನ್ ಮತ್ತು ಜುಲೈ ತಿಂಗಳ ಜಮಾ ಆಗುವುದು ಬಾಕಿ ಇದೆ.! ಅಂದರೆ ಮಹಿಳೆಯರಿಗೆ ಇನ್ನೂ ಮೂರು ಕಂತಿನ ಹಣ ಬ್ಯಾಂಕ್ ಖಾತೆಗೆ ಜಮಾ ಆಗುವುದು ಬಾಕಿ ಇದೆ.! ಹಾಗಾಗಿ ಈ ಹಣ ಯಾವಾಗ ಜಮಾ ಆಗುತ್ತದೆ ಎಂದು ಮಹಿಳೆಯರು ಹೆಸರು ನೋಡುತ್ತಿದ್ದಾರೆ
ಗೃಹಲಕ್ಷ್ಮಿ ಯೋಜನೆಯ ಬಾಕಿ ಕಂತಿನ ಹಣ ಯಾವಾಗ ಬಿಡುಗಡೆ ಆಗುತ್ತೆ..?
ಸ್ನೇಹಿತರೆ ಈಗಾಗಲೇ ಮಹಿಳೆಯರ ಬ್ಯಾಂಕ್ ಖಾತೆಗೆ 21ನೇ ಕಂಚಿನ ಹಣ ಬಿಡುಗಡೆಯಾಗಿದ್ದು ಇನ್ನೂ ಮೇ ಹಾಗು ಜೂನ್ ಮತ್ತು ಜುಲೈ ತಿಂಗಳ ಬಿಡುಗಡೆ ಬಾಕಿ ಇದೆ.! ಆದ್ದರಿಂದ ಮಹಿಳೆಯರು ಬಾಕಿ ಇರುವ ಮೂರು ಕಂತಿನ ಹಣ ಯಾವಾಗ ಜಮಾ ಆಗುತ್ತದೆ ಎಂದು ಎದುರು ನೋಡುತ್ತಿದ್ದಾರೆ
ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ (Lakshmi hebbalkar) ಅವರು ಮಾನ್ಯ ಪತ್ರಿಕಾಗೋಷ್ಠಿ ಕರೆದು ಶೀಘ್ರದಲ್ಲೇ ಮಹಿಳೆಯರ ಖಾತೆಗೆ ಬಾಕಿ (pending amount) ಇರುವಂತ ಎಲ್ಲಾ ಕಂತಿನ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಂಡಿದ್ದೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ
ಹೌದು ಸ್ನೇಹಿತರೆ ಬಾಕಿ ಇರುವ ಮೂರು ಕಂತಿನ ಸೆಪ್ಟೆಂಬರ್ ಮೊದಲ ವಾರದಲ್ಲಿ ರೂ.2000 ಹಾಗೂ ಎರಡನೇ ವಾರದಲ್ಲಿ ರೂ.2000 ಮತ್ತು ಸೆಪ್ಟೆಂಬರ್ ಕೊನೆಯ ವಾರದಲ್ಲಿ ರೂ.2000 ಈ ರೀತಿ ಮೂರು ಕಂತಿನ್ನ ಹಣ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ
ವಿಶೇಷ ಸೂಚನೆ:- ಸ್ನೇಹಿತರೆ ನಿಮಗೆ ಇನ್ನೂ ಗೃಹಲಕ್ಷ್ಮಿ ಯೋಜನೆಯ ಹಲವಾರು ಕಂತಿನ ಹಣ ಬಾಕಿ ಇದ್ದರೆ, ಕೂಡಲೇ ನಿಮ್ಮ ಹತ್ತಿರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಿ ಹಾಗೂ ಅರ್ಜಿ ಸಲ್ಲಿಸಿದ ಮಹಿಳೆಯ ಬ್ಯಾಂಕ್ ಖಾತೆ ಸರಿಪಡಿಸಿ ಮತ್ತು ಗೃಹಲಕ್ಷ್ಮಿ ಅರ್ಜಿಯ ಈ ಕೆ ವೈ ಸಿ ಪ್ರಕ್ರಿಯೆ ಪೂರ್ಣಗೊಳಿಸಿ ಅಂದರೆ ಮಾತ್ರ ನಿಮಗೆ ಬಾಕಿ ಎಲ್ಲಾ ಕಂತಿನ ಹಣ ಜಮಾ ಆಗುತ್ತೆ
ಇದೇ ರೀತಿ ನಿಮಗೆ ಪ್ರತಿದಿನ ಹೊಸ ವಿಷಯಗಳು ಹಾಗೂ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ಪ್ರತಿದಿನ ಪಡೆಯಲು ಬಯಸುತ್ತಿದ್ದೀರಾ ಹಾಗಾದರೆ ನೀವು ಒಂದು ಕೆಲಸ ಮಾಡಿ ಅದು ಏನು ಅಂದರೆ
ನಮ್ಮ ವಾಟ್ಸಪ್ ಚಾನೆಲ್ ಹಾಗೂ ಟೆಲಿಗ್ರಾಂ ಚಾನೆಲ್ ಗಳಿಗೆ ಸೇರಿಕೊಳ್ಳಬಹುದು